ನಗಾಜಿ
19ನೆಯ ಶತಮಾನದ ಒಬ್ಬ ಮರಾಠಿ ಸಂತ ಕವಿ. ಹುಟ್ಟಿದ್ದು ವಿದರ್ಭದ ಚಂದ್ ಜಿಲ್ಲೆಯಲ್ಲಿನ ಪಾರಡಿ ಗ್ರಾಮದಲ್ಲಿ. ಬಾಲ್ಯದಿಂದಲೂ ದೈವ ಭಕ್ತನಾದ ಈತ ಒಬ್ಬ ವೃದ್ಧ ವ್ಯಕ್ತಿಯ ಉಪದೇಶದಂತೆ 12 ವರ್ಷ ಮಾತಾಪಿತೃಗಳ ಸೇವೆಮಾಡಿ ಪರಮೇಶ್ವರನ ಸಾಕ್ಷಾತ್ಕಾರದ ಅನುಭವಗಳನ್ನು ಪಡೆದ. ಅನಂತರ ಮರಾಠಿ ಹಾಗೂ ಹಿಂದೀ ಭಾಷೆಗಳಲ್ಲಿ ಅನೇಕ ಭಜನೆಗಳನ್ನೂ ಅಭಂಗಗಳನ್ನೂ ಬರೆದ. ಇಂದಿಗೂ ಗೋಕುಲಾಷ್ಟಮಿ ದಿನ ಪಾರಡಿಯ ಗೋಪಾಲಕೃಷ್ಣನ ದೇವಾಲಯದಲ್ಲಿ ದೊಡ್ಡ ಪ್ರಮಾಣದಲ್ಲಿ ಜಾತ್ರೆ ಸೇರುತ್ತದೆ. ನಗಾಜಿ ಮೊದಲಾದವರನ್ನು ಜನ ಇಂದಿಗೂ ಸ್ಮರಿಸುತ್ತಾರೆ.				 (ಎಸ್.ಎನ್.ಜೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ